ಚಿತ್ರ: ರವಿಚಂದ್ರ
ಸಾಹಿತ್ಯ: ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್

ಅ ಅ ಅ ಅ ಆ... ಕಂಡೊಡನೆ ಕರಪಿಡಿದು.. ಕಲ್ಪಿಸದಾ ಸುಖ ಕೊಡುವ ಭಾಮೆಯಲೀ ಇಂದೇನು ಕೋಪವೊ ಕಾಣೇ!.. 

ಅ ಅ ಅ ಅ ಆ
ಭಾಮಾಮಣಿ.. ಚಿಂತಾಮಣಿ.. ಕಾಮನರಗಿಣಿ.. ಮುತ್ತಿನಮಣಿ.. ಕರಿಮಣಿ.. ರಿಮಣಿ.. ಮಣಿ ನೀ! ರಾಣಿ ರಾಣಿ..    
ಸತ್ಯಭಾಮೆ!

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ? |೨|
ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ? |೨|.. ಏಕೆ ನನ್ನಲಿ? ಏಕೆ ನನ್ನಲಿ?

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?..
ನನ್ನಲಿ ಕೋಪವೆ... ಕೊಪವೆ ನನ್ನಲಿ ... ಏಕೆ ನನ್ನಲಿ!?

ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ದುರು ದುರು ನೋಡದೆ.. ಕಿಡಿಗಳ ಕಾರದೆ.. ಕೆಣಕದೆ ಕಾಡದೆ.. ದೂರಕೆ ಓಡದೆ |೨|
ತನುವಿನ ತಾಪವ ಕಳೆಯಲು ಸನಿಹಕೆ |೨|.. ಬಾರೇ ಮೊಹಿನಿ

ಹೇ! ಬಾರೇ ಮೊಹಿನಿ.. ಮೊಹಿನಿ ಈ.. ಕಾಮಿನಿ ಈ.. ಭಾಮಿನಿ ಈ.. ಬಾರೇ ಮೊಹಿನಿ!

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ಗಲ್ಲವ ಹಿಡಿಯಲೆ?.. ಕೆನ್ನೆಯ ಸವರಲೆ?.. ತೋಳಲಿ ಭಾಮೆಯ ನಡುವನೆ ಬಳಸಲೆ? |೨|
ಕೊಳಲಲಿ ಮೋಹನ ರಾಗವ ನುಡಿಸಲೆ? |೨|.. ಹೇಳೇ ಕೋಮಲೆ
ಹೇ! ಹೇಳೇ ಕೋಮಲೆ.. ಕೋಮಲೆ ಏ.. ಶ್ಯಾಮಲೆ ಏ.. ಚಂಚಲೆ ಏ.. ಹೇಳೇ ಕೋಮಲೆ!

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ರಾಧೆಯ ವಲ್ಲೆನು.. ರುಕ್ಮಿಣಿ ವಲ್ಲೆನು.. ಭಾಮೆಯನಲ್ಲದೆ ಯಾರನು ನೋಡೆನು! |೨|
ಕೈಗಳ ಮುಗಿದರು ಯಾರು ನೋಡರು |೨|.. ಸೋತೆ ಪ್ರೇಯಸಿ.. 
ಅ ಹಾ! ಸೋತೆ ಪ್ರೇಯಸಿ.. ಪ್ರೇಯಸಿ ಈ.. ರೂಪಸಿ ಈ.. ಊರ್ವಸಿ ಈ 

ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ.. ಸತ್ಯಭಾಮೆ! ಕೋಪವೇನೆ ನನ್ನಲಿ?

ಸರಸಕೆ ಕರೆದರೆ ವಿರಸವ ತೋರುವೆ |೩| ಏಕೆ ನನ್ನಲೀ!?

Category: ಕನ್ನಡ ಚಿತ್ರಸಾಹಿತ್ಯ
Category: ರವಿಚಂದ್ರ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannadaವರ್ಗ:ಡಾ.ರಾಜ್‍ಕುಮಾರ್ ಗಾಯನ